ಅರಸೀಕೆರೆಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತೆಂಗಿನಕಾಯಿ ಬೆಳೆಗೆ ಹಾಗು ಮಾರಾಟಕ್ಕೆ ಇದೊಂದು ಪ್ರಮುಖ ಕೇಂದ್ರ. ಹೊಯ್ಸಳರ ಕಾಲದ ಅರಸಿ ಎಂಬ ರಾಣಿಯೋರ್ವಳು ಈ ಊರಿನಲ್ಲಿ ಕೆರೆಯೊಂದನ್ನು ನಿರ್ಮಿಸಿದ ಕಾರಣಕ್ಕೆ ಈ ಹೆಸರು ಬಂದಿದೆ.
ಹಾಸನ ಸೀಮೆ
Wednesday, February 17, 2016
ಆಲೂರು
ಇದು ಹಾಸನ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಪೂರ್ವ ಭಾಗದಲ್ಲಿರುವ ಒಂದು ತಾಲ್ಲೂಕು ಮತ್ತು ಮುಖ್ಯ ಪಟ್ಟಣ. ೧೮೭೬-೭೮ ರಲ್ಲಿ ಕ್ಷಾಮ ಪರಿಸ್ಥಿತಿ ಉಂಟಾಗಿದ್ದಾಗ ಇತರ ತಾಲ್ಲೂಕುಗಳಿಗಿಂತಲೂ ಹೆಚ್ಚಿನ ತೊಂದರೆಯನ್ನು ಅನುಭವಿಸಿತು. ಈ ತಾಲ್ಲೂಕಿನ ಜನಸಂಖ್ಯೆ ೮೬,೧೩೧ (೨೦೦೧). ಪಟ್ಟಣದ ಜನಸಂಖ್ಯೆ ೬,೧೧೩(೨೦೦೧). ತಾಲ್ಲೂಕಿನಲ್ಲಿ ಸಾಕಷ್ಟು ವ್ಯವಸಾಯ ಯೋಗ್ಯವಾದ ಪ್ರದೇಶಗಳಿದ್ದು ಶೇ.೨೭ ಕರಿಮಣ್ಣಿನ ಭೂಮಿಯಿದೆ. ಜೋಳ, ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಬೇಸಾಯಕ್ಕೆ ಮಳೆಯ ನೀರೇ ಆಧಾರ. ಕಾಡುಭಾಗ ಬಹಳ ಕಡಿಮೆ. ಮಳೆ ಸರಿಯಾಗಿ ಬೀಳದ ವರ್ಷಗಳಲ್ಲಿ ನೀರಿನ ಅಭಾವ ಪರಿಸ್ಥಿತಿ ತಲೆದೋರುವುದು ಸಾಮಾನ್ಯ.
ಬೇಲೂರು
ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗರು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
Subscribe to:
Comments (Atom)